ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ತರಗತಿಗಳು ಅನಿವಾರ್ಯ.. GFGC GBD 26th May 2022





ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ತರಗತಿಗಳು ಅನಿವಾರ್ಯ ; ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ
ಗೌರಿಬಿದನೂರು; ಹೊಸದಾಗಿ ಶಾಲಾತರಗತಿಗಳನ್ನು ಪ್ರಾರಂಭಿಸಿರುವ ಶಾಲೆಗಳಲ್ಲಿ ಕಲಿಕಾ ಚೇತರಿಕೆ (ಬ್ರಿಡ್ಜ್ ಕೋರ್ಸ್) ತರಗತಿಗಳನ್ನು ನಡೆಸುವ ಮೂಲಕ ಕಳೆದ ಎರಡು ವರ್ಷಗಳಿಂದ ಕರೋನಾ ದಿಂದ ಶಾಲೆಗೆ ಸರಿಯಾಗಿ ಹಾಜರಾಗದ ವಿದ್ಯಾರ್ಥಿಗಳಿಗೆ ಬುಡತಳ ಶಿಕ್ಷಣ ಕಲಿಕೆಗೆ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ ತಿಳಿಸಿದರು.
ಗೌರಿಬಿದನೂರು ನಗರದಲ್ಲಿನ ಶ್ರೀರಾಮಕೃಷ್ಣ ಶಾರದಾ ದೇವಿ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೨-೨೩ನೇ ಸಾಲಿನ ಶಾಲಾಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಸಿದ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕೇವಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಪಠ್ಯದಿಂದ ಪ್ರತಿಭಾವಂತರನ್ನು ತಯಾರಿಸಲು ಕಷ್ಟಸಾಧ್ಯವಾಗುವುದರಿಂದ ವಿವಿಧ ರೀತಿಯ ಕೌಶಲ್ಯಗಳು, ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಾಗ ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೋ.ಮಧುಸೂದನರೆಡ್ಡಿ ಮಾತನಾಡಿ ಪೋಷಕರು ತಮ್ಮ ಮಕ್ಕಳು ಉತ್ತಮ ಅಂಕಗಳಿಸಬೇಕು (ಪರ್ಸಂಟೇಜ್)ಎಂಬು ಗುಂಗಿನ ಹಿಂದೆ ಬಿದ್ದಿದ್ದಾರೆ ಆದರೆ ಪ್ರತಿಭಾವಂತರಿಗೆ ಪರ್ಸಂಟೇಜ್ ಅವಶ್ಯಕತೆ ಇರುವುದಿಲ್ಲ ಎಲ್ಲಾ ಚಿಂತಕರು, ಪ್ರತಿಭಾವಂತರು ದಾರ್ಶನಿಕರು ಅಂಕಗಳಲ್ಲಿ ನಂಬಿಕೆ ಇಟ್ಟಿರಲಿಲ್ಲ ಎಂದರು.
ಕ್ರೀಡಾ ಚಟವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ನಾಟ್ಯ ಮುಂದವುಗಳನ್ನು ಹೆಚ್ಚು ಹೆಚ್ಚು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸುವ ಕೆಲಸ ಆಗಬೇಕಿದ್ದು ಇದು ಇಂದಿನ ಯಾಂತ್ರಿಕ ಜೀವನದ ವೇಗಕ್ಕೆ ಅವಶ್ಯಕವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೋ.ಸುರೇಶ್ ಬಾಬು ಮಾತನಾಡಿ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕಾದರೆ ಶಿಕ್ಷಕರ ಪಾತ್ರ ಮಹತ್ತರವಾದದ್ದು, ತಂದೆ ತಾಯಿಗಿಂತಲೂ ವಿದ್ಯಾರ್ಥಿಗಳು ಹೆಚ್ಚು ಅಪೇಕ್ಷಿಸುವುದು ಶಿಕ್ಷಕರನ್ನು ಆದ್ದರಿಂದ ಶಿಕ್ಷಕರ ಪಾತ್ರ ಮಹ್ತತರವಾದದ್ದು ಶಿಕ್ಷಕರು ಪೂರ್ವತಯಾರಿಯಿಂದ ಪಠ್ಯವನ್ನು ಮಾಡುವ ಜೊತೆಗೆ ಅರ್ಪಣಾ ಮನೋಭಾವದಿಂದ ಶಿಕ್ಷಕ ವೃತ್ತಿಯನ್ನು ಮಾಡಬೇಕು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹೆಚ್ಚು ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಣದಲ್ಲಿನ ಅವರ ಗುರಿಯಾವುದು ಎಂಬುದನ್ನು ಅರಿತು ಅಧ್ಯಯನ ಮಾಡುವತ್ತ ಆಸಕ್ತಿ ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವಿ.ಡಿ.ಗಣೇಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಜಿವಿಎಲ್ ಶ್ರರ್ಮ, ಸಂಚಾಲಕರಾದ ಟಿ.ವಿ.ಪ್ರಕಾಶ್ ಉಪಸ್ಥಿತರಿದ್ದರು.
(೨೬-೦೫-ಜಿಬಿಎನ್‌ಆರ್-ಪಿ-೧ ಗೌರಿಬಿದನೂರು ನಗರದಲ್ಲಿನ ಶ್ರೀರಾಮಕೃಷ್ಣ ಶಾರದಾ ದೇವಿ ವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೨-೨೩ನೇ ಸಾಲಿನ ಶಾಲಾಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ ಉದ್ಘಾಟನೆ ನಡೆಸಿದ ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.)








 

Comments

Placement Incubation

Prepare the accounting Equations for the following transactions 31.08.2023

AFA test question Paper to be held on 23rd July 2023 at 9 am.

AFA Test question Paper on 23rd July 2023 at 9 am.